ಮಲಯಾಳ ಭಾಷೆ
ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದ ಪ್ರಮುಖ ಲಿಖಿತ ಭಾಷೆಗಳ ಪೈಕಿ ಒಂದು. ಮೂಲ ದ್ರಾವಿಡ ಭಾಷೆಯಿಂದ ವಿಕಾಸಗೊಂಡಿದೆ. ಕೇರಳ ರಾಜ್ಯದ ಆಡಳಿತ ಭಾಷೆಯಾಗಿ ಇರುವ ಇದು ಭಾರತಾದ್ಯಂತ ಜನರ ತಾಯಿನುಡಿ. ಭಾರತೀಯ ಸಂವಿಧಾನ ಮಾನ್ಯತೆ ಪಡೆದಿದೆ.

ಮಲಯಾಳ ಪದ ಮಲೆ+ಆಳ ಎಂಬ ಶಬ್ದಗಳಿಂದ ನಿಷ್ಪನ್ನವಾಗಿದೆ. ಮಲೆ ಎಂದರೆ ಪರ್ವತ, ಆಳ ಎಂದರೆ ಗಾಢ, ಸಮುದ್ರ ಅಥವಾ ನದಿ. ಮಲೆ ಮತ್ತು ಆಳವಾದ ಸಮುದ್ರ ಮತ್ತು ನದಿಗಳಿಂದ ಸುತ್ತುವರಿದ ನಾಡಿನ ಭಾಷೆಯಿದು ಎಂಬುದಾಗಿ ಅರ್ಥವಿವರಣೆ ಇದೆ. ಅಳವಲ್ ಎಂದರೆ ನೀರು ತುಂಬಿದ ಪ್ರದೇಶ ಎಂಬ ಅರ್ಥವೂ ಉಂಟು. ಕೇರಳ ರಾಜ್ಯದ ಕರಾವಳಿ ಪ್ರದೇಶದಲ್ಲಿ ನೆಲಸಿದ್ದ ದ್ರಾವಿಡ ಜನರ ಗುಂಪೊಂದು ಮಾತನಾಡುತ್ತಿದ್ದ ಉಪ ಭಾಷೆಯಲ್ಲಿ ಉಂಟಾದ ಭಾಷಾ ವ್ಯತ್ಯಾಸಗಳಿಂದ ಮಲಯಾಳ ಭಾಷೆ ಅಸ್ತಿತ್ವಕ್ಕೆ ಬಂತು. ಪ್ರತ್ಯೇಕ ಭಾಷೆಯಾಗುವ ಮುನ್ನ ಇದು ದ್ರಾವಿಡ ಭಾಷಾ ಗುಂಪಿನ ಯಾವ ಉಪಶಾಖೆಗೆ ಸೇರಿತ್ತು, ಯಾವ ಕಾಲದಲ್ಲಿ ಸ್ವತಂತ್ರ ಭಾಷೆಯಾಗಿ ರೂಪುಗೊಂಡಿತು ಎಂಬ ವಿಚಾರಗಳಲ್ಲಿ ಅಭಿಪ್ರಾಯ ಭೇದಗಳಿವೆ. ಮಲಯಾಳ ಭಾಷೆ, ತಮಿಳಿನ ಸೋದರ ಭಾಷೆಯೆಂದೂ ತಮಿಳುನಾಡಿನ ತಮಿಳು, ದೇಶ ಭೇದಕ್ಕನುಗುಣವಾಗಿ ವ್ಯತ್ಯಾಸ ಪಡೆದದ್ದರಿಂದ ಮಲಯಾಳ ಭಾಷೆ ಉಗಮಿಸಿತೆಂದೂ ಪ್ರಸಿದ್ದ ಭಾಷಾ ವಿಜ್ಞಾನಿಗಳಾದ ಕಾಲ್ಡ್‍ವೆಲ್ ಮತ್ತು ಗುಂಡರ್ಟ್ ಎಂಬುವರು ಅಭಿಪ್ರಾಂiÀi ಪಟ್ಟಿದ್ದಾರೆ. ಎ.ಆರ್. ರಾಜರಾಜವರ್ಮ (1863-1918) ತನ್ನ ಕೇರಳ ಪಾಣಿನೀಯಮ್ (1895) ಎಂಬ ಕೃತಿಯಲ್ಲಿ ತಮಿಳು ಸಾಹಿತ್ಯಕ ಭಾಷೆಯನ್ನು ಚಿಂತಮಿಳ್ ಎಂದೂ ಆಡು ಭಾಷೆಯನ್ನು ಕೊಡುಂದಮಿಳ್ ಎಂದೂ ಕರೆದಿದ್ದಾನೆ. ಕೊಡುಂದಮಿಳಿನ ಉಪಭಾಷೆಯೇ ಮಲಯಾಳ. ಸ್ವರಸಂವರಣ, ಪುರುಷ ಭೇದಲೋಪ, ಅನುನಾಸಿಕ ಬಾಹುಳ್ಯ, ತಾಲವ್ಯಾದೇಶ ಮತ್ತಿತ್ತರ ಭಾಷಾ ವೈಶಿಷ್ಟ್ಯಗಳಿಂದಾಗಿ ತಮಿಳಿನಿಂದ ಮಲಯಾಳ ಭಾಷೆ ಬೇರ್ಪಟ್ಟು ಸ್ವತಂತ್ರವಾಯಿತೆಂದು ಅವನು ಅಭಿಪ್ರಾಯ ಪಟ್ಟಿದ್ದಾನೆ.

ಈ ಭಾಷೆಯಲ್ಲಿ ಅ ಇ ಉ ಎ ಒ ಮತ್ತು ಅವುಗಳ ದೀರ್ಘ ರೂಪಗಳಿವೆ. ತುಟಿಗಳನ್ನು ವೃತ್ತಾಕಾರವಾಗಿ ಮಾಡದೆ ಉಚ್ಚರಿಸುವ ಸಂವೃತ ಉಕಾರವೂ ಉಂಟು. ಕೇರಳ ಪಾಣಿನೀಯ ಕೃತಿಯಲ್ಲಿ ಇದು ಹ್ರಸ್ವತರ ಉಕಾರ. ಗುಂಡರ್ಟ್ ಇದನ್ನು ಅರ್ಧ ಉಕಾರವೆಂದು ಪರಿಗಣಿಸಿದ್ದಾನೆ. ಎಲ್. ವಿ. ರಾಮಸ್ವಾಮಿ ಅಯ್ಯರ್ ಎಂಬಾತ ಈ ಧ್ವನಿಯನ್ನು ಮಧ್ಯಸ್ವರಗಳ ಸಾಲಿಗೆ ಸೇರಿಸಿ ಆಕಾರ ಮತ್ತು ಉಕಾರಕ್ಕಿಂತ ಭಿನ್ನವಾದ ಧ್ವನಿಮೌಲ್ಯ ಕೊಟ್ಟಿದ್ದಾನೆ. ಕೃಷ್ಣ ಪಿಷಾರಡಿ ಇದನ್ನು ಸಂವೃತ ಆಕಾರವೆಂದು ಕರೆದಿದ್ದಾನೆ. ಆಧುನಿಕ ಭಾಷಾ ವಿಜ್ಞಾನಿಗಳು ಈ ಧ್ವನಿಯನ್ನು ಮಧ್ಯಸ್ವರಗಳ ಸಾಲಿಗೆ ಸೇರಿಸಿದ್ದಾರೆ. ಇದಕ್ಕೆ ಕಾರಣ ಉಕಾರದ ಉಚ್ಚಾರಣೆಯಾಗುವಾಗ ಆಗುವಂತೆ ತುಟಿಗಳು ವೃತ್ತಾಕಾರವಾಗುವುದಿಲ್ಲ. ಕೇರಳದ ಉತ್ತರ ಭಾಗದಲ್ಲಿಯ ಜನ ಈ ಧ್ವನಿಯನ್ನು ಉಚ್ಚರಿಸುವಾಗ ನಾಲಗೆ ಉನ್ನತ ಸ್ಥಿತಿಯಲ್ಲಿದ್ದರೆ, ದಕ್ಷಿಣ ಭಾಗದಲ್ಲಿಯ ಜನರ ಉಚ್ಚಾರಣೆಯಲ್ಲಿ ನಾಲಗೆ ಸ್ವಲ್ಪ ಕೆಳಗಡೆ ಇರುತ್ತದೆ. ಅಂದರೆ ಉತ್ತರದ ಜನ ಕೇಂದ್ರ ಮಧ್ಯಮ ಸ್ವರವಾಗಿಯೂ  ಉಚ್ಚರಿಸುವರು. ಈ ಧ್ವನಿಗೆ ದೀರ್ಘ ಇಲ್ಲ.

ಈ ಭಾಷೆಯಲ್ಲಿ ವತ್ರ್ಸ ಸ್ಪರ್ಶ ಒಂದು ವಿಶೇಷ ಧ್ವನಿ. ದ್ವಿತ್ವರೂಪದಲ್ಲಿರುವ ಈ ಧ್ವನಿಯ ಉಚ್ಚಾರಣ ಸ್ಥಾನ  ದಂತಧ್ವನಿಯ ಸ್ಥಾನಕ್ಕಿಂತ  ಹಿಂದಕ್ಕೂ ಮೂರ್ಧನ್ಯ ಧ್ವನಿಯ ಸ್ಥಾನಕ್ಕಿಂತ ಮುಂದಕ್ಕೂ ಇದೆ.

ಆರು ಅನುನಾಸಿಕ ಧ್ವನಿಗಳು ಇವೆ.  ದಂತ್ಯ ನಕಾರ ಮತ್ತು ವತ್ಸ್ರ್ಯ ನಕಾರ ವಿಶಿಷ್ಟ ಧ್ವನಿಗಳು. ಉದಾಹರಣೆಗೆ: ಕನ್ನು-ಕರು, ಅನ್ನುತ್ತೆ- ಆಗಿನ (ದಂತ್ಯ ನಕಾರ) , ಕನ್ನಿ- ಕನ್ಯಾಮಾಸ, ಅನ್ನುತ್ತೆ-ಹಂಸವನ್ನು  (ವತ್ಸ್ರ್ಯ ನಕಾರ) ಞ ಮತ್ತು ಚ ವರ್ಗಗಳ ಕ ಕಾರಣಗಳು ಙ ವರ್ಗ ಪರಿಸರದಲ್ಲಿ ಮಾತ್ರವಲ್ಲದೆ ಇತರ ಪರಿಸರಗಳಲ್ಲೂ ಸ್ವತಂತ್ರವಾಗಿ ಉಚ್ಚರಿಸಬಹುದಾದ ವಿಶಿಷ್ಟ  ಧ್ವನಿಗಳು.  ಉದಾಹರಣೆಗೆ ಞÁನ್ (ನಾನು), ತೇಙ (ತೆಂಗು), ¿ಕಾರ ಮತ್ತು ¾ಕಾರಗಳಿವೆ.  ಉದಾಹರಣೆಗೆ ತ¿õÉ (ಮಗ್ಗ), ತ¾õÉ (ಕಣ): ವಾ¾ (ಬಾಳೆ), ವಾ¿ (ಮೀನಿನ ಒಂದು ಪ್ರಭೇದ).  ಸಾಮಾನ್ಯವಾಗಿ ಉಚ್ಚರಿಸುವ ಕಕಾರ ಮಾತ್ರವಲ್ಲದೆ ಯಕಾರದ ಛಾಯೆಯೊಡನೆ ಉಚ್ಚರಿಸುವ ಮತ್ತೊಂದು ಬಗೆಯ ಕ ಕಾರವು ಬಳಕೆಯಲ್ಲಿದೆ. ಈ ಯಕಾರದ  ಛಾಯೆ ಅರ್ಥಭೇದವನ್ನು ಉಂಟುಮಾಡುತ್ತದೆ. ಉದಾಹರಣೆಗೆ; ಕಕ್ಕು (ಕದಿಯುವುದು), ಕಕ್ಕ್ಯು (ಕಹಿಯಾಗುವುದು), ವಕ್ಕು (ಬದಿ), ವಕ್ಕು: (ಇಡುವುದು).
ಈ ಭಾಷೆಯಲ್ಲಿ ಮಹಾಪ್ರಾಣಯುಕ್ತ ಸ್ಪರ್ಶಧ್ವನಿಗಳಿಲ್ಲ. ಸಂಸ್ಕøತ ಶಬ್ದಗಳ ಉಚ್ಚಾರಣೆಯಲ್ಲಿ ಮಾತ್ರ ಅವು ಬಳಕೆಯಾಗುತ್ತವೆ. ಇದರ ಮೂಲ ಶಬ್ದಗಳನ್ನು ಗಮನಿಸಿದರೆ ಪ-ಬ, ತ-ದ ಮುಂತಾದ ಧ್ವನಿಗಳಲ್ಲಿಯ ಅಘೋಷ- ಘೋಷವಿವಕ್ಷೆಯೂ ಅರ್ಥಭೇದ ಸೂಚಿಸುವ ಘಟಕಗಳೂ ಇಲ್ಲ. ಸ್ಪರ್ಶಧ್ವನಿಗಳು ಪದಾದಿಯಲ್ಲಿ ಅಘೋಶವಾಗಿಯೂ (ಪ ತ ಚ ಟ ಕ) ಪದ ಮಧ್ಯದಲ್ಲಿ ಎರಡು ಸ್ವರಗಳ ಮಧ್ಯೆ ಬರುವಾಗ ಘೋಷದ ಹಾಗೆಯೂ ಅನುನಾಸಿಕ ಧ್ವನಿಗಳಿಗೆ ಪರವಾದಾಗ ಘೋಷವಾಗಿಯೂ ದ್ವಿತ್ವರೂಪದಲ್ಲಿ ಬರುವಾಗ ಅಘೋಷವಾಗಿಯೂ ಉಚ್ಚಾರವಾಗುತ್ತವೆ. ಸಂಸ್ಕøತ ಮತ್ತಿತರ ಭಾಷೆಗಳಿಂದ ಸ್ವೀಕಾರ ಪಡೆದ ಧ್ವನಿಗಳಲ್ಲಿ ಈ ನಿಯಮ ಕಂಡು ಬರುವುದಿಲ್ಲ.

ಈ ಭಾಷೆಯಲ್ಲಿ ಲೋಪ, ಆಗಮ, ದ್ವಿತ್ವ ಮತ್ತು ಆದೇಶ ಎಂಬ ನಾಲ್ಕು ಬಗೆಯ ಸಂಧಿ ವ್ಯವಸ್ಥೆ ಇದೆ. ನಾಮಪದಗಳಲ್ಲಿ ಲಿಂಗ ವಚನ ವಿಭಕ್ತಿಗಳಿವೆ. ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಎಂಬ ಮೂರು ಬಗೆಯ ಲಿಂಗ ವ್ಯವಸ್ಥೆ, ಏಕವಚನ, ಬಹುವಚನ ಎಂಬ ಎರಡು ಬಗೆಯ ವಚನ ವ್ಯವಸ್ಥೆ ಇದೆ. ಸರ್ವನಾಮಗಳಲ್ಲಿ ಉತ್ತಮ, ಮಧ್ಯಮ ಮತ್ತು ಪ್ರಥಮ ಎಂಬ ಪುರುಷ ಭೇದಗಳೂ ಏಕ, ಬಹು ಎಂಬ ಎರಡು ವಚನ ಭೇದಗಳೂ ಉಂಟು. ಉತ್ತಮ ಪುರುಷ ಬಹುವಚನದಲ್ಲಿ ಕೇಳುವವರನ್ನು ಬಿಟ್ಟು ಹೇಳುವ ಅಥವಾ ಸೇರಿಸಿ ಹೇಳುವ ಎರಡೂ ರೂಪಗಳಿವೆ. ಪ್ರಥಮ ಪುರುಷ ಏಕವಚನದಲ್ಲಿ ಪುಲ್ಲಿಂಗ. ಸ್ತ್ರೀ ಲಿಂಗ ಮತ್ತು ನಪುಂಸಕ ಲಿಂಗ ಎಂಬ ಮೂರು ಬಗೆಯ ಲಿಂಗ ಭೇದಗಳೂ ಬಹುವಚನದಲ್ಲಿ ಪುಲ್ಲಿಂಗ-ಸ್ತ್ರೀಲಿಂಗ ಮತ್ತು  ನಪುಂಸಕಲಿಂಗ ಎಂಬ ಎರಡು ಬಗೆಯ ಲಿಂಗ ಭೇದಗಳೂ ಇವೆ.

ಉದಾಹರಣೆಗೆ;
ಸರ್ವನಾಮಗಳು		ಏಕವಚನ			ಬಹುವಚನ
ಉತ್ತಮಪುರುಷ		ಞನ್(ನಾನು)		ಞಙ್ಚಳ್ (ನಾವು) ಕೇಳುವವರನ್ನು
						ಬಿಟ್ಟು, ನಮ್ಮಳ್ (ನಾವು) ಕೇಳುವವರನ್ನು           
	ಸೇರಿಸಿ.
ಮಧ್ಯಮ ಪುರುಷ		ನೀ (ನೀನು)		ನಿಙÐಳ್ (ನೀವು) 
ಪ್ರಥಮ ಪುರುಷ						"
ಪುಲ್ಲಿಂಗ			ಅವನ್ (ಅವನು)		ಅವರ್ (ಅವರು)
ಸ್ತ್ರೀಲಿಂಗ			ಅವಳ್ (ಅವಳು)			"
ನಪುಂಸಕಲ್ಲಿಂಗ		ಅತು (ಅದು)		ಅವ (ಅವು)

ಪ್ರಥಮ ಪುರುಷ ಸರ್ವನಾಮ ಮತ್ತು ಇತರ ನಾಮಪದಗಳಲ್ಲಿ ಮಹತ್ ಮತ್ತು ಅಮಹತ್ ಎಂಬ ಭೇದಗಳಿವೆ. ಮನುಷ್ಯವಾಚಕ ಮತ್ತು ವಿವೇಚನಾಶಕ್ತಿಯುಳ್ಳ ಜೀವಿಗಳನ್ನು ಮಹತ್ ಎಂದೂ ಇತರ ಪ್ರಾಣಿವಾಚಕ ಹಾಗೂ ನಿರ್ಜೀವ ವಸ್ತುಗಳನ್ನು ಅವಹಂತ್ ಎಂದೂ ವರ್ಗೀಕರಿಸಲಾಗಿದೆ. ಮಹತ್ ಶಬ್ದಗಳಲ್ಲಿ ಲಿಂಗಭೇದಕ್ಕೆ ಅನುಸಾರವಾಗಿ ಪುಲ್ಲಿಂಗ ಸ್ತ್ರೀ ಲಿಂಗ ಎಂಬ ಭೇದಗಳಿದ್ದರೆ ಅಹಮತ್ ಶಬ್ದಗಳಲ್ಲಿ ನಪುಂಸಕಲಿಂಗ ಎಂಬ ಒಂದು ಭೇದ ಮಾತ್ರ ಇದೆ. ಪುಲ್ಲಿಂಗ ಸ್ತ್ರೀ ಲಿಂಗ ಭೇದವನ್ನು ಸೂಚಿಸಲು ಏಕವಚನದಲ್ಲಿ ಕೆಲವೆಡೆ-ಅನ್ ಮತ್ತು-ಅಳ್ ಅಥಾವ-ಇ ಪ್ರತ್ಯಯಗಳೂ ಸೇರುತ್ತವೆ. ಉದಾಹರಣೆಗೆ: ಜೋಲಿಕ್ಕಾರನ್ (ಕೆಲಸದವನು), ಜೋಲಿಕ್ಕಾರಿ (ಕೆಲಸದವಳು), ಜೋಲಿಕ್ಕಾರ್ (ಕೆಲಸದವರು) ಭಾರ್ಯಮಾರ್ (ಹೆಂಡತಿಯರು), ಭರ್ತಾಕ್ಕನ್ ಮಾರ್ (ಗಡಂದಿರು), ಮಗನ್ (ಮಗ), ಮಗಳ್ (ಮಗಳು) ನಪುಂಸಕಲಿಂಗ ಏಕವಚನ ಸೂಚಕವಾಗಿ ಆಕಾರಾಂತ ಶಬ್ದಗಳಿಗೆ-ಅಂ ಪ್ರತ್ಯಯ ಸೇರುತ್ತದೆ. ನಪುಂಸಕಲಿಂಗ ಬಹುವಚನ ಪ್ರತ್ಯಯ-ಕಳ್ ಇದು ಪಶ್ಚ ಸ್ವರಗಳ ಮುಂದೆ ಬರುವಾಗ-ಕ್ಕಳ್ ಎಂಬ ರೂಪವನ್ನೂ ಅನುನಾಸಿಕದ ಮುಂದೆ ಬರುವಾಗ -ಙ್ಞಳ್ ಎಂಬ ರೂಪವನ್ನೂ ಹೊಂದುತ್ತದೆ. ಉದಾಹರಣೆಗೆ: ಪಶು (ಹಸು), ಪಶುಕ್ಕಳ್ (ಹಸುಗಳು); ಮರಂ (ಮರ), ಮರಙÐಳ್ (ಮರಗಳು).

ಪ್ರಾಚೀನ ವ್ಯಾಕರಣ ಪಂಡಿತರು ಏಳು ವಿಭಕ್ತಿಗಳಿವೆ ಎಂದು ಹೇಳಿದ್ದರೂ ಪ್ರಥಮಾ ವಿಭಕ್ತಿಗೆ ಪ್ರತ್ಯಯ ಇಲ್ಲದಿರುವುದರಿಂದ ವಿಭಕ್ತಿಗಳ ಸಂಖ್ಯೆ ಆರು ಮಾತ್ರ ಎನ್ನಬಹುದು.
ವಿಭಕ್ತಿ		ಪ್ರತ್ಯಯ		ಅರ್ಥ		ಉದಾಹರಣೆ
ನಿರ್ದೇಶಿಕ	-		-		ಅವನ್ (ಅವನು)   
ಪ್ರತಿಗ್ರಾಹಿಕ	ಎ		-ಅನ್ನು		ಅವನೆ (ಅವನನ್ನು)
ಸಂಯೋಜಿಕ	-ಒಡು,-ಓಡು	ಓಡನೆ		ಅವನೊಂಡು (ಅವನೊಡನೆ)
ಉದ್ದೇಶಿಕ	-ಕ್ಕು,-ಉ	-ಗೆ,-ಕ್ಕೆ			ಅವನು, ಅವಳು (ಅವರಿಗೆ, ಅವಳಿಗೆ)
ಪ್ರಯೋಜಿಕ 	_ಅಲ್		_ಇಂದ		ಅವನಾಲ್ (ಅವನಿಂದ)
ಸಂಬಂಧಿಕ	_ಡೆ, _ಉಡೆ,-ಇಂಡೆ_ಅ		ಅವಂಡೆ (ಅವನಲ್ಲಿಗೆ)
ಆಧಾರಿಕ		_ಇಲ್,ಕಲ್     ಅಲ್ಲಿ           ಅವನಿಲ್ (ಅವನಲ್ಲಿ)

ದ್ರಾವಿಡ ಭಾಷೆಗಳ ಕ್ರಿಯಾರಚನೆಯಲ್ಲಿ ಬಲು ಮುಖ್ಯ ಪಾತ್ರವಹಿಸುವ ಪುರುಷ ವಚನ ಪ್ರತ್ಯಯಗಳು ಈ ಭಾಷೆಯಲ್ಲಿ ಕಂಡುಬರುವುದಿಲ್ಲ. ಬರುತ್ತೇನೆ, ಬರುತ್ತೇವೆ, ಬರುತ್ತೀಯೆ, ಬರುತ್ತೀರಿ, ಬರುತ್ತಾನೆ, ಬರುತ್ತಾಳೆ, ಬರುತ್ತಾರೆ. ಬರುತ್ತದೆ, ಬರುತ್ತವೆ ಎಂಬ ರೂಪಗಳಿಗೆ ಈ ಭಾಷೆಯಲ್ಲಿ ವರುನ್ನು ಎಂಬ ಒಂದೇ ರೂಪ ಇದೆ. ಮೂಲದ್ರಾವಿಡ ಕ್ರಿಯಾಪದದಲ್ಲಿ ಪುರುಷ ಭೇದ ಇರಲ್ಲಿಲ್ಲವೆಂದೂ ಇತರ ಸೋದರ ಭಾಷೆಗಳಲ್ಲಿ ಪುರುಷ ವಚನಸೂಚಕ ಪ್ರತ್ಯಯಗಳ ಪ್ರಯೋಗ ಆರಂಭವಾಗುವ ಮುಂಚೆಯೇ ಈ ಭಾಷೆ ತಮಿಳಿನಿಂದ ಬೇರೆಯಾಗಿರಬಹುದೆಂದೂ ಭಾಷಾತಙ್ಞರು ಊಹಿಸಿದ್ದಾರೆ. ಆದರೆ ಈ ಭಾಷೆಯ ಕೆಲವು ಪ್ರಾಚೀನ ಕೃತಿಗಳಲ್ಲಿ ಪುರುಷಭೇದ ಕಂಡು ಬರುತ್ತದೆ. ಆದ್ದರಿಂದ ಈ ಭಾಷೆಯಲ್ಲೂ ಮೊದಲು ಪುರುಷ ಭೇದವಿತ್ತೆಂದೂ ಕಾಲಕ್ರಮೇಣ ಇದು ಬಳಕೆಯಿಂದ ಹೊರತಾಯಿತೆಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಕ್ರಿಯಾಪದಗಳಲ್ಲಿ ಮೂರು ಬಗೆಯ ಕಾಲ ವ್ಯವಸ್ಥೆಯಿದೆ ಅನ್ನು ಪ್ರತ್ಯಯ ವರ್ತಮಾನ ಕಾಲವನ್ನೂ (ಉದಾಹರಣೆಗೆ: ಪೋಕುನ್ನು,-ಉಂ ಪ್ರತ್ಯಯ ಭವಿಷ್ಯತ್ ಕಾಲವನ್ನೂ (ಭಾವಿಕಾಲ ಉದಾಹರಣೆಗೆ: ಪೋಕ್ಕುಂ) ಸೂಚಿಸುತ್ತವೆ. ಇ,_ಚ್ಚು,_ಞ್ಞ,_ಟಿ,_ಡು,_ನ್ನು ಮುಂತಾದವು ಭೂತಕಾಲ ಸೂಚಕ ಪ್ರತ್ಯಯಗಳು.

ಪ್ರತ್ಯಯಗಳು		ಉದಾಹರಣೆ					ಅರ್ಥ
_ಇ			ಅವನ್ ಪೋಯಿ				ಅವನು ಹೋದನು
_ಚ್ಚು 			ಅವನ್ ಒಡಚ್ಚು 				ಅವನು ಒಡೆದನು
_ಞ್ಞ 			ಅದು ಒಡಙ್ಞ 				ಅದು ಒಡೆಯಿತು
_ಟಿ			ಅವನ್ ವೆಟ್ಟಿ 				ಅವನು ಕಡಿದನು
_ಡು			ಅವನ್ ಕಂಡು				ಅವನು ನೋಡಿದನು
_ನ್ನು			ಅವ್ ವರುನ್ನು				ಅವನು ಬಂದನು

ಕ್ರಿಯಾಪದದ ಇನ್ನಿತರ ರೂಪಗಳು: ವರಾಂ (ಬರಬಹುದು),_ವರು ಅಥಾವ ವರಣಂ (ಬನ್ನಿ), ವರಟೆ (ಬರಲಿ), ವನ್ನೆಂಗಿಲ್ (ಬಂದರೆ), ವರಾನ್ (ಬರಲಿಕ್ಕೆ), ವನ್ನಿಟ್ಟು (ಬಂದು), ವರುನ್ನ (ಬರುವ), ವನ್ನ (ಬಂದ), ವಾ (ಬಾ) ಇತ್ಯಾದಿ. ಕ್ರಿಯಾಪದಕ್ಕೆ_ಇಲ್ಲ ಎಂಬ ರೂಪ ಸೇರಿಸಿದರೆ ನಿಷೇಧ ಕ್ರಿಯೆಯಾಗುತ್ತದೆ. ಉದಾಹರಣೆಗೆ ವನ್ನಿಲ್ಲ (ಬಂದಿಲ್ಲ), ವರುನಿಲ್ಲ (ಬರುವುದಿಲ್ಲ). ಭವಿಷ್ಯತ್ ಕಾಲದಲ್ಲಿ_ಅ ಪ್ರತ್ಯಯ ಸೇರಿಸುವುದರಿಂದ ನಿಷೇಧರೂಪ ಉಂಟಾಗುತ್ತದೆ. ಉದಾಹರಣೆಗೆ ವರಾ (ಬರುವುದಿಲ್ಲ). ಕ್ರಿಯಾಧಾತುವಿಗೆ_ಆದ ಮತ್ತು _ಆದೆ ಪ್ರತ್ಯಯ ಸೇರಿಸುವುದರಿಂದ ಕೃದಂತಗಳ ನೀಷೇಧ ರೂಪ ಉಟಾಂಗುತ್ತದೆ. ಉದಾಹರಣೆಗೆ ವರಾದೆ (ಬರದ).

ಈ ಭಾಷೆಯ ಕೆಲವು ಕ್ರಿಯಾಪದಗಳಲ್ಲಿ ಅಕರ್ಮಕ ಸಕರ್ಮಕ ರೂಪಗಳಿವೆ. ಅಕರ್ಮಕ ರೂಪಕ್ಕೆ ಭೂತಕಾಲದಲ್ಲಿ_ಞ್ಞ ಪ್ರತ್ಯಯವೂ ಸಕರ್ಮಕ ರೂಪದಲ್ಲಿ ವರ್ತಮಾನ ಭವಿಷತ್ ರೂಪಗಳಲ್ಲಿ_ಚ್ಚು ಪ್ರತ್ಯಯವೂ ಸೇರುತ್ತವೆ. ಸಕರ್ಮಕ ರೂಪದಲ್ಲಿ  ವರ್ತಮಾನ ಭವಿಷತ್ _ಚ್ಚು ಪ್ರತ್ಯಯವೂ ಸೇರುತ್ತವೆ. ಸಕರ್ಮಕ ರೂಪದಲ್ಲಿ ವರ್ತಮಾನ ಭವಿಷತ್ ರೂಪಗಳಲ್ಲಿ _ಕ್ಕ ಪ್ರತ್ಯಯ ಸೇರುತ್ತದೆ. ಉದಾಹರಣೆಗೆ ಅಕರ್ಮ:ಒಡಞ್ಞ (ಒಡೆಯಿತು), ಒಡೆಯನ್ನು (ಒಡೆಯುತ್ತದೆ): ಸಕರ್ಮಕ: ಒಡಚ್ಚು (ಒಡೆದನು): ಒಡಕ್ಕುನ್ನು (ಒಡೆಯುತ್ತೇನೆ).
ಈ ಭಾಷೆಯ ಪದ ಭಂಡಾರದಲ್ಲಿ  ಅನೇಕ ಸಂಸ್ಕøತ ಪದಗಳು ಸೇರಿವೆ. ಅವುಗಳ ಪೈಕಿ ಎಷ್ಟೋ ಪದಗಳು ಹೊಸ ಅರ್ಥಗಳನ್ನು ಪಡೆದಿವೆ. ಉದಾಹರಣೆಗೆ ಕೆಲವನ್ನಿಲ್ಲಿ ಗಮನಿಸಬಹುದು. ಅನಾವಶ್ಯ (ಕೆಟ್ಟಮಾತು). ಅಪೇಕ್ಷ (ಅರ್ಜಿ), ಅವಧಿ (ರಜೆ);ಆಕ್ಷೇಪ (ಗೇಲಿಮಾಡು), ಕಲ್ಯಾಣ (ಮದುವೆ), ಗೌರವ (ಅಹಂಕಾರ), ತಾಮಸ (ತಂಗುವುದು), ದೀನಂ (ಕಾಯಿಲೆ), ಪೊಜ್ಯ (ಸೂನ್ನೆ), ಪ್ರಸಂಗ (ಭಾಷಣ), ಭಾವ (ಅಹಂಕಾರ), ಭ್ರಮೆ (ಅಭಿಲಾಷೆ), ಮತ್ಸರ (ಸ್ಪರ್ಧೆ), ಸಂಸಾರ (ಮಾತು) ಇತ್ಯಾದಿ.
ಈ ಭಾಷೆಯಲ್ಲಿ ಅನೇಕ ಪ್ರಭೇದಗಳು ಇವೆ. ಇವುಗಳ ಪೈಕಿ ನಾಯರ್, ಪುಲಯ, ಪಣಿಯ, ಮಾಪಿಳ, ಎರವ ಪ್ರಭೇದಗಳನ್ನು ಕುರಿತು ಅನೇಕರು ಸಂಶೋಧನೆ ನಡೆಸಿದ್ದಾರೆ. ಮಲಯಾಳ ಭಾಷೆ ಮತ್ತು ಉಪಭಾಷೆಗಳ ಅಧ್ಯಯನ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇರಳ ಸರ್ಕಾರ, ವಿಶ್ವವಿದ್ಯಾಲಯ ಮತ್ತು ಸಾಹಿತ್ಯ ಅಕಾಡೆಮಿ ಅನೇಕ ಉಪಯುಕ್ತ ಕಾರ್ಯಗಳನ್ನು ಕೈಗೊಂಡಿವೆ.										
(ಸಿ.ಎ.; ಸಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ